Font size:
Bullion Market 2025 October 17th: ಚಿನ್ನದ ಬೆಲೆ ಇಂದು ಶುಕ್ರವಾರ ಗ್ರಾಮ್ಗೆ 300 ರೂ ಏರಿದರೆ, ಬೆಳ್ಳಿ ಬೆಲೆ 4 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 11,865 ರೂನಿಂದ 12,170 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,277 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 194 ರೂ ಆಗಿದೆ. ಮುಂಬೈ ಮೊದಲಾದೆಡೆ 185 ರೂಗೆ ಇಳಿದಿದೆ. ಚೆನ್ನೈ ಇತ್ಯಾದಿ ಕಡೆ 203 ರೂ ಆಗಿದೆ.
ಬೆಂಗಳೂರು, ಅಕ್ಟೋಬರ್ 17: ಚಿನ್ನದ ಬೆಲೆ ಶುಕ್ರವಾರ ಭಾರೀ ಏರಿಕೆ ಕಂಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 300 ರೂಗಳಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 333 ರೂ ಹೆಚ್ಚಳ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಬೆಳ್ಳಿ ಬೆಲೆ (silver rates) ಇಂದು 4 ರೂ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,21,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,32,770 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,21,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 19,390 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 20,300 ರೂ ಇದೆ.
Posted 1 month, 2 weeks ago









Comments
Leave a Comment